Surprise Me!

News Cafe | Competition In Congress For CM Post | HR Ranganath | July 4, 2022

2022-07-04 5 Dailymotion

ಅಸೆಂಬ್ಲಿ ಎಲೆಕ್ಷನ್ ವರ್ಷದಲ್ಲಿ ಕಾಂಗ್ರೆಸ್‍ನಲ್ಲಿ ಮತ್ತೆ ನಾಯಕತ್ವ ಫೈಟ್ ಜೋರಾಗ್ತಿದೆ. ಸಿದ್ದರಾಮಯ್ಯಗೆ 75 ವರ್ಷದ ತುಂಬುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 3ರಂದು ದಾವಣಗೆರೆಯಲ್ಲಿ ಭರ್ಜರಿ ಸಿದ್ದರಾಮೋತ್ಸವಕ್ಕೆ ಸಿದ್ದು ಬಣ ಸಜ್ಜಾಗಿದೆ. ಆದರೆ, ಸಿದ್ದರಾಮೋತ್ಸವದ ಉತ್ಸಾಹದಲ್ಲಿರುವ ಸಿದ್ದರಾಮಯ್ಯ ಕ್ಯಾಂಪ್‍ಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಡಿಕೆಶಿ ಟೀಂ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ. ಸಿದ್ದರಾಮೋತ್ಸವದಲ್ಲೂ `ಮುಂದಿನ ಸಿಎಂ ಸಿದ್ದರಾಮಯ್ಯ' ಘೋಷಣೆ-ಹರ್ಷೋದ್ಗಾರ ಮುಗಿಲು ಮುಟ್ಟುವ ಸಾಧ್ಯತೆ ಇದೆ. ಈ ರೀತಿ ಪದೇ ಪದೇ `ಮುಂದಿನ ಸಿಎಂ ಸಿದ್ದರಾಮಯ್ಯ' ಎಂಬ ಬೆಂಬಲಿಗರ ತಾಳಮೇಳಕ್ಕೆ ಬ್ರೇಕ್ ಹಾಕಲು ಡಿಕೆಶಿ ಬಣ ಪ್ಲ್ಯಾನ್ ಮಾಡಿದ್ಯಂತೆ. ಸಿದ್ದರಾಮೋತ್ಸದಲ್ಲೇ ಸಾಮೂಹಿಕ ನಾಯಕತ್ವ ಘೋಷಣೆ ಮಾಡಿಸುವ ಬಗ್ಗೆ ನಾನಾ ಲೆಕ್ಕಾಚಾರ ಶುರುವಾಗಿದೆ. ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಗಮಿಸಿದಾಗ ಅವರಿಂದಲೇ ಸಾಮೂಹಿಕ ನಾಯಕತ್ವ ಘೋಷಣೆ ಮಾಡಿಸಬೇಕೆಂಬ ಹಠಕ್ಕೆ ಡಿಕೆಶಿ ಟೀಂ ಬಿದ್ದಿದೆ ಅಂತ ತಿಳಿದು ಬಂದಿದೆ. ಹಾಗಾದ್ರೆ, ಸಿದ್ದರಾಮೋತ್ಸವದಲ್ಲಿ ಸಿದ್ದು ಅಭಿಮಾನಿಗಳ ಮುಂದೆಯೇ ಸಿದ್ದರಾಮಯ್ಯಗೆ ನಿರಾಸೆ ಮಾಡುವ ಹಂತಕ್ಕೆ ಕಾಂಗ್ರೆಸ್ ಒಳ ರಾಜಕೀಯ ರಂಗೇರುತ್ತಾ..? ಎಂಬ ಕುತೂಹಲ ಇದೆ. ಒಂದು ಉತ್ಸವ.. ಒಂದು ಘೋಷಣೆ.. ಎಲ್ಲರೂ ಒಂದೇ ಎಂಬ ಮಂತ್ರ ಪಠಿಸಲು ರಾಹುಲ್ ಗಾಂಧಿ ಕೂಡ ಒಪ್ಪುತ್ತಾರಾ..? ಕೇವಲ ಬರ್ತ್‍ಡೇ ಆಚರಣೆ ಸಂಭ್ರಮದ ಮಾತುಗಳಿಗಷ್ಟೇ ಸೀಮಿತವಾಗುತ್ತಾ..? ನೋಡ್ಬೇಕಿದೆ. ಡಿಕೆಶಿ ಟೀಂ ಲೆಕ್ಕಾಚಾರ ನೋಡೋದಾದ್ರೆ.. <br /><br />#publictv #newscafe #hrranganath

Buy Now on CodeCanyon